ಇವು ನನ್ನ ಕವಿತೆಗಳು. ನನ್ನ ಮನಸಿಗೆ ಅನಿಸಿದ್ದನ್ನು , ಬರೆಯಬೇಕೆನಿಸಿದ್ದನ್ನು,ಮುಚ್ಚುಮರೆಯಿಲ್ಲದೆ ಹೇಳಬೇಕೆನಿಸಿದ್ದನ್ನು ಹೃದಯದ ಕರೆಗೆ ಓಗೊಟ್ಟು ಬರೆದಿದ್ದೇನೆ. ಯಾವ ಮತ,ಪಂಥಗಳ ಗೊಡವೆಗೂ ಹೋಗದೆ, ನನ್ನ ಮನಸ್ಸಿಗೆ ಸರಿ ಎನಿಸಿದ್ದನ್ನು ಬರೆಯುವ ಪ್ರಯತ್ನ ಮಾಡಿದ್ದೇನೆ.
ಕವಿತೆಗಳಲ್ಲಿ ಯಾವುದೇ ರೀತಿ-ನಿಯಮಗಳನ್ನು ಹಾಕಿಕೊಳ್ಳದೆ ಬರೆಯಲಾಗಿದೆ.
ನಾನೇನು ಪ್ರತಿಭಾನ್ವಿತನಲ್ಲ ಹಾಗು ನಾನೇನು ಪಂಡಿತನಲ್ಲ. ಕನ್ನಡ ಸಾಹಿತ್ಯದ ಅಭ್ಯಾಸ ಮಾಡಿದ್ದೇನೆ. ಯಾರನ್ನೂ ಅನುಕರಿಸಲು ನಾನು ಪ್ರಯತ್ನಪಟ್ಟಿಲ್ಲ. ನನ್ನ ಬರವಣಿಗೆ ನನಗೆ ಖುಷಿಕೊಡುತ್ತೆ, ಅದಕ್ಕೆ ಬರೆಯಬೇಕೆಂಬ ಹಂಬಲವಿದೆ